ಪಟ್ಟಿಗೆ ಹಿಂತಿರುಗಿ

ಕಗ್ಗ 406 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ನರನಾರಿಮೋಹದಿಂ ವಂಶವದಕಾಗಿ ಮನೆ । ನೆರೆ ಹೊರೆಗಳೂರು ರಾಷ್ಟ್ರಗಳು ಸಂಘಗಳು ॥ ಕೆರೆಯೊಂದು ಕೇಂದ್ರದಿಂದಲೆಯೆ ಬಳೆಗಳು ನೂರು । ಹರಿವಂತೆ ಸಂಸಾರ - ಮಂಕುತಿಮ್ಮ ॥ ೪೦೬ ॥

naranArimOhadim vamshavadakAgi mane । nere horegaLUru rAShTragaLu sanghagaLu ॥ kereyondu kEndradindaleye baLegaLu nUru । harivante samsAra - Mankutimma ॥ 406 ॥

ಕನ್ನಡದಲ್ಲಿ ಅರ್ಥ

ಹೆಣ್ಣು ಗಂಡಿನ ಪರಸ್ಪರ ಆಕರ್ಷಣೆ ಮತ್ತು ಮೋಹದಿಂದಲೇ ವಂಶಗಳು, ಮನೆ,ನೆರೆ ಹೊರೆಯವರು,ಊರುಗಳು,ಸಂಘಗಳು,ದೇಶಗಳು ಆಗಿವೆ. ಕೆರೆಯ ನೀರಲ್ಲಿ ಒಂದು ಬಿಂದುವಿನಿಂದ ಹೊರಡುವ ಅಲೆಯ ಬಳೆಗಳು ನೂರಾರಾಗುವಂತೆ ಈ ಜಗತ್ತಿನಲ್ಲಿ ಸಂಸಾರವೆಂಬುದು ಎಂದು ಜಗದ್ಬೆಳವಣಿಗೆಯ ಪ್ರಕ್ರಿಯೆಯನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

From the love between a man and woman starts a family and a dynasty. To support a family, a house. Then neighbors. Later villages and then nations and alliances. There is only one pod. But a vibration started at the center of it creates a hundred waves spreading in all direction. Such is this world. - Mankutimma

ವಿಷಯಗಳು

LifeSocietyLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.