ಪಟ್ಟಿಗೆ ಹಿಂತಿರುಗಿ

ಕಗ್ಗ 401 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಮರಣಶಯ್ಯೆಯದೆಂದು ತಿಳಿದೊಡಂ ರೋಗಿಯನು । ಹರಣಮಿರುವನ್ನೆಗಂ ಪರಿಚರಿಸುವಂತೆ ॥ ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ । ಚರಿಸು ನೀನಾಳಾಗಿ - ಮಂಕುತಿಮ್ಮ ॥ ೪೦೧ ॥

maraNashayyeyadendu tiLidoDam rOgiyanu । haraNamiruvannegam paricharisuvante ॥ sthiravallavI lOkavAdoDam aduLLanaka । charisu nInALAgi - Mankutimma ॥ 401 ॥

ಕನ್ನಡದಲ್ಲಿ ಅರ್ಥ

ರೋಗಿ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದಾನೆ ಎಂದು ಅರಿತ ವೈದ್ಯನು, ಆ ರೋಗಿಯಲ್ಲಿ ಪ್ರಾಣವಿರುವ ತನಕ, ಔಷಧಿಗಳನ್ನು ಇತ್ತು ಪರಿಚರ್ಯೆ ಮಾಡುವ ರೀತಿಯಲ್ಲಿ,ಸ್ಥಿರವಲ್ಲದ, ಈ ಲೋಕದಲ್ಲಿ ನಮ್ಮೊಳಗೆ ಪ್ರಾಣವಿರುವ ತನಕ ಒಂದು ಆಳಿನಂತೆ ಕೆಲಸಮಾಡುತ್ತಲೇ ಇರಬೇಕು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Even after knowing that a patient is terminallty ill, we treat him up until the last second he has life left in him. Similarly, we should treat this world even though we know that every thing in this world will get destroyed in time. - Mankutimma

ವಿಷಯಗಳು

LifeDeath

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.