ಪಟ್ಟಿಗೆ ಹಿಂತಿರುಗಿ

ಕಗ್ಗ 395 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ತುಂಬುದಿಟ ಜೀವಿತದ ಗಣನೆಗಳ ಮೀರಿದುದು । ಇಂಬುಗಳ ಬಿಂಬಗಳ ಸನ್ನಿಧಾನವದು ॥ ಅಂಬರದಿನಾಚಿನದು, ತುಂಬಿರುವುದೆತ್ತಲುಂ । ಶಂಭು ಪರಬೊಮ್ಮನದು - ಮಂಕುತಿಮ್ಮ ॥ ೩೯೫ ॥

tumbudiTa jIvitada gaNanegaLa mIridudu । imbugaLa bimbagaLa sannidhAnavadu ॥ ambaradinAchinadu, tumbiruvudettalum । shambhu parabommanadu - Mankutimma ॥ 395 ॥

ಕನ್ನಡದಲ್ಲಿ ಅರ್ಥ

ಈ ಜಗತ್ತಿಗೆ ಕಾರಣವಾದ ಪೂರ್ಣ ಸತ್ಯ ಅಥವಾ ಪರಮ ಸತ್ಯ ನಮ್ಮ ಲೆಕ್ಕಾಚಾರಕ್ಕೆ ನಿಲುಕದ್ದು. ಪ್ರೀತಿ ಪ್ರೇಮಗಳ ಪ್ರತಿರೂಪದ ಸ್ಥಾನವದು. ಗಗನಕ್ಕೂ ಮೀರಿದ್ದು. ಎಲ್ಲಕಡೆಯೂ ತುಂಬಿರುವ ಈ ರೂಪ ಪರಬ್ರಹ್ಮನಾದ ಶಂಬುವಿನ ರೂಪವು ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಅರ್ಥ ಮತ್ತು ವ್ಯಾಖ್ಯಾನ

"Comprehending the full truth is beyond our lifetimes. The ultimate truth is there in all reflections of itself. It can be seen with love. It exists even beyond the skies in all directions. It exists by the will of the Creator" - Mankutimma

ವಿಷಯಗಳು

WisdomLifeDeathSelfLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.