ಪಟ್ಟಿಗೆ ಹಿಂತಿರುಗಿ

ಕಗ್ಗ 380 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಹುಲಿಯ ಕೆಣುಕುವುದು ಹುಲಿ; ಕಪಿಯನಣಕಿಪುದು ಕಪಿ । ಹುಲಿಕಪಿಗಳವಿತಿರದ ನರಜಂತುವೆಲ್ಲಿ? ॥ ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು । ಕುಲಕದಿರು ಬಾಲವನು - ಮಂಕುತಿಮ್ಮ ॥ ೩೮೦ ॥

huliya keNukuvudu huli; kapiyanu aNakipudu kapi । hulikapigaLavitirada narajantuvelli? ॥ malagiruva mRugavanantiralu biDuvude jANu । kulakadiru mAlavanu - Mankutimma ॥ 380 ॥

ಕನ್ನಡದಲ್ಲಿ ಅರ್ಥ

ಒಂದು ಹುಲಿಯನ್ನು ಮತ್ತೊಂದು ಹುಲಿ ಕೆಣಕುವುದು.ಒಂದು ಕಪಿ ಮತ್ತೊಂದು ಕಪಿಯನ್ನು ಅಣಕಿಸುತ್ತದೆ. ಇವೆರಡಕ್ಕೂ ಅವುಗಳದೇ ಆದಂತ ಗುಣಗಳಿವೆ. ಆದರೆ ಹುಲಿ ಮತ್ತು ಕಪಿಗಳೆರಡರ ಸಮ್ಮಿಶ್ರ ಗುಣಗಳಿಲ್ಲದ ಮನುಷ್ಯ ಸಿಗುವುದೇ ಇಲ್ಲ. ಹಾಗೆ ಎರಡೂ ಗುಣಗಳಿರುವ ಈ ಮನುಷ್ಯನ ಎರಡೂ ಗುಣಗಳನ್ನು ಹಾಗೆ ಬಿಡುವುದೇ ಜಾಣತನ."ನಿನ್ನಲ್ಲಿರುವ ಈ ಗುಣಗಳನ್ನು ಕೆದಕದೆ ಇರು" ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"A tiger will provoke another tiger. A monkey will provoke anohter monkey. Can anyone find a man who does not have a tiger and a monkey inside him? An intelligent person will let the sleeping animals inside him lie. Don't try to shake the tail." - Mankutimma

ವಿಷಯಗಳು

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.