ಪಟ್ಟಿಗೆ ಹಿಂತಿರುಗಿ

ಕಗ್ಗ 368 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ । ದಿಕ್ಕುಕಾಣದೆ ಜೀವಿಯಲೆಯುವುದಚ್ಚರಿಯೇಂ? ॥ ಒಕ್ಕಟನೊಡೆಯರೇ ಕಲಿಯದಿರೆ ನಮ್ಮ ಗತಿ- । ಗಿಕ್ಕಟ್ಟು ತಪ್ಪುವುದೆ? - ಮಂಕುತಿಮ್ಮ ॥ ೩೬೮ ॥

mukkoTi dEvategaLu ALuta iha lOkadali । dikkukANade jIvi aleyuvudu achchariyEm? ॥ okkaTTan oDeyarE kaliyade ire namma gatige । ikkaTTu tappuvude? - Mankutimma ॥ 368 ॥

ಕನ್ನಡದಲ್ಲಿ ಅರ್ಥ

ಜಗತ್ತೆಲ್ಲ ‘ ದೇವರನ್ನು ನಂಬು, ನಂಬಿ ಕೆಟ್ಟವರಿಲ್ಲವೋ, ದೇವರು ನಂಬಿದವರ ಕೈಬಿಡನು’ ಎಂದೆಲ್ಲಾ ಹೇಳುತ್ತದೆ. "ಆದರೆ ತೀರ ಕಷ್ಟದಲ್ಲಿ ಇದ್ದು ಕಣ್ನೀರಿಡುವ ಜನರೇಕೆ ದೇವರನ್ನು ನಂಬುವುದಿಲ್ಲ. ಆಸೆಯನ್ನು ಬಿಟ್ಟವನಿಗೆ ನಂಬಿಕೆಯ ಹಂಗು ಏಕೆ? ನೀನೂ ಸಹ ಈ ನಂಬಿಕೆಯ ವೃತ್ತದಿಂದ ಹೊರಬರಬೇಕಾದರೆ ನಿನ್ನ ಮನಸ್ಸಿನಲ್ಲಿ ವಿರಕ್ತಿಯನ್ನು ತುಂಬಿಕ"’ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"The world is run by three crore Gods (as per popular theology). Then why is man wandering aimlessly? Is it surprising? When the lords themselves don't have unity, then how can the followers escape such a fate?" - Mankutimma

ವಿಷಯಗಳು

DevotionLifeMoralityFate

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.