ಪಟ್ಟಿಗೆ ಹಿಂತಿರುಗಿ

ಕಗ್ಗ 343 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಸಾಕುಸಾಕೆನಿಸುವುದು ಲೋಕ ಸಂಪರ್ಕಸುಖ । ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ॥ ಮೂಕನವೆ ತುರಿಸದಿರೆ, ತುರಿಯುತಿರೆ ಹುಣ್ಣುರಿತ । ಮೂಕನಪಹಾಸ್ಯವದು - ಮಂಕುತಿಮ್ಮ ॥ ೩೪೩ ॥

sAku sAku enisuvudu lOka samparka sukha । sOkideDe turiyanu ebbisuva turuchiyadu ॥ mUkanave turisadire, turiyutire huNNurita । mUkana apahAsyavadu - Mankutimma ॥ 343 ॥

ಕನ್ನಡದಲ್ಲಿ ಅರ್ಥ

ಲೋಕ ಸಂಪರ್ಕದ ಸುಖ ಹಲವು ಬಾರಿ ಸಾಕು ಸಾಕೆನಿಸುತ್ತದೆ. ಸಂಪರ್ಕಗಳು, ತುರಿಕೆ ಸೊಪ್ಪು ಸೋಕಿದಾಗ ಆಗುವಂತಾ ಉರಿಯನ್ನು ನೀಡುತ್ತವೆ. ತುರಿಸಿಕೊಂಡರೆ ಹುಣ್ಣಾಗಿ ಮತ್ತಷ್ಟು ನವೆಯಾಗುತ್ತದೆ ಮತ್ತು ತುರಿಸಿಕೊಳ್ಳದಿದ್ದರೆ ಒಂದು ಮೂಕವೇದನೆಯನ್ನು ನೀಡುತ್ತದೆ.ಇದು ಹೇಗಿದೆಯಂದರೆ, ಒಬ್ಬ ಮೂಕ, ಆದರೂ ಅಪಹಾಸ್ಯಮಾಡಬೇಕೆಂದುಕೊಂಡಾಗ ಮಾತನಾಡಲಾಗದೆ ಬರೀ ಕೈಸನ್ನೆಯಲ್ಲೇ ಮಾಡುವಂಥಾ ಚೇಷ್ಟೆಯನ್ನೆ ಮಾಡುತ್ತೇವೆ ನಾವು ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"One gets fed up of his associations with the pleasures of this world. It is like posion ivy; we get itches where ever it touches. If you don't scratch, then we suffer a silent agony. If you scratch, you get rashes. It is like making fun of a helpless person." - Mankutimma

ವಿಷಯಗಳು

LifeSociety

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.