ಪಟ್ಟಿಗೆ ಹಿಂತಿರುಗಿ

ಕಗ್ಗ 308 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ । ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು ॥ ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು । ಉರುಳದಿಹುದಚ್ಚರಿಯೊ‌!‌- ಮಂಕುತಿಮ್ಮ ॥ ೩೦೮ ॥

sarakAra harigOlu, teresuLigaLu atta itta । sure kudidavaru kelaru huTTu hAkuvaru ॥ birugALi bIsuvudu, janaveddu kuNiyuvudu । uruLade ihudu achchariyo! - Mankutimma ॥ 308 ॥

ಕನ್ನಡದಲ್ಲಿ ಅರ್ಥ

ನಮ್ಮ ಸರಕಾರ ಒಂದು ಹರಿಗೋಲಿದ್ದಂತೆ. ಆಡಳಿತದ ಸಾಗರದಲ್ಲಿ ಈ ಸರಕಾರದ ಹರಿಗೋಲು, ತೆರೆಗಳ ಮತ್ತು ಸುಳಿಗಳ ತುಯ್ದಾಟದ ನಡುವೆ ಸಾಗುತ್ತಿದೆ. ಇದರ ಚುಕ್ಕಾಣಿ ಹಿಡಿದು ಹುಟ್ಟು ಹಾಕುವವರು ಹೆಂಡ ಕುಡಿದವರಂತೆ ಅಧಿಕಾರದಿಂದ ಉನ್ಮತ್ತರಾಗಿ ನಡೆದುಕೊಳ್ಳುತ್ತಿದ್ದಾರೆ. ವಿರೋದಪಕ್ಷದವರು ಕಾಲೆಳೆಯಲು ಪ್ರಯತ್ನಿಸಿದರೂ, ಜನರಿಗೆ ಏನಾಗುವುದೋ ಎಂದು ಕಳವಳದಿಂದ ಇದ್ದರೂ, ಈ ಸರಕಾರವೆಂಬ ದೋಣಿ ಉರುಳಿ ಮುಳುಗಿ ಹೋಗದೆ ಇರುವುದೇ ಆಶ್ಚರ್ಯ ಎಂದು ನಮ್ಮ ಸರಕಾರ, ವಿರೋಧಪಕ್ಷಗಳು ಮತ್ತು ಆಡಳಿತ ವ್ಯವಸ್ಥೆಯನ್ನು ವಿಮರ್ಶೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .

ಅರ್ಥ ಮತ್ತು ವ್ಯಾಖ್ಯಾನ

"Government is like a coracle. There are whirls and strong currents on either side. Drunkards are in charge of the oars. There is a strong wind. There are people who are dancing (like revolting). It is surprising that it has not capsized." - Mankutimma

ವಿಷಯಗಳು

MoralityNatureSociety

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.