ಪಟ್ಟಿಗೆ ಹಿಂತಿರುಗಿ

ಕಗ್ಗ 286 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಸನ್ನಿಹಿತ ಮನುಜನಲಿ ದೈವಪಾಶವವೆರಡು । ಪುಣ್ಯ ಪಾಪದ ಮಿಶ್ರವವನ ಸ್ವಭಾವ ॥ ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು । ಮಣ್ಣೊಳುರುಳುವುದೊಮ್ಮೆ - ಮಂಕುತಿಮ್ಮ ॥ ೨೮೬ ॥

sannihita manujanali daiva pAshava eraDu । puNya pApada mishravavana svabhAva ॥ kaNNomme yAgasada beLakinoDane ADuvudu । maNNoLu uruLuvudomme - Mankutimma ॥ 286 ॥

ಕನ್ನಡದಲ್ಲಿ ಅರ್ಥ

ಮನುಷ್ಯನ ಸ್ವಭಾವ ದೈವ ಗುಣ ಮತ್ತು ಪಶು ಗುಣಗಳ ಮಿಶ್ರಣ. ಹಾಗಾಗಿ ಅವನು ಕೆಲವು ಬಾರಿ ಪುಣ್ಯವನ್ನು ಮಾಡುತ್ತಾನೆ ಮತ್ತೆ ಕೆಲವು ಬಾರಿ ಪಾಪ ಮಾಡುತ್ತಿರುತ್ತಾನೆ, ಎಂದು ಆಗಸ ಮತ್ತು ಮಣ್ಣಿನ ಉಪಮೆಗಳನ್ನು ನೀಡುತ್ತಾ, ಮನುಷ್ಯ ಸ್ವಭಾವವನ್ನು ವಿಶ್ಲೇಸಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"Both divine and demonic characters are together in a man. His actions lead both to good and bad karma. At times our eyes look at the sky (and feel happy). At other times, the same eyes roll over mud (looking down in shame)." - Mankutimma

ವಿಷಯಗಳು

DevotionMoralityFateNature

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.