ಪಟ್ಟಿಗೆ ಹಿಂತಿರುಗಿ

ಕಗ್ಗ 244 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಒಲ್ಲೆನೆನುವರದಾರ್ ಅಹಿಂಸೆತತ್ತ್ವದ ಸೊಬಗ? । ಸಲ್ಲಿಸುವೆನಾ ವ್ರತವನೆನಲೊಂದು ತೊಡಕು ॥ ಹುಲ್ಲೆಯನು ತಿನುವ ಹುಲಿಯೊಣಹುಲ್ಲನುಣಲಹುದೆ । ಎಲ್ಲಿ ಸೃಷ್ಟಿಯಲಿ ದಯೆ? - ಮಂಕುತಿಮ್ಮ ॥ ೨೪೪ ॥

ollenu enuvaru adAr ahimse tattvada sobaga? । sallisuvenA vratavanu enalondu toDaku ॥ hulleyanu tinuva huliyu oNahullanu uNalahude । elli sRuShTiyali daye? - Mankutimma ॥ 244 ॥

ಕನ್ನಡದಲ್ಲಿ ಅರ್ಥ

ಅಹಿಂಸೆಯ ಪ್ರತಿಪಾದನೆಯನ್ನು ಬೇಡವೆನ್ನುವವರು ಯಾರು. ಆದರೆ ಅಹಿಂಸಾ ವ್ರತ ಪಾಲನೆಯಲ್ಲಿ ತೊಡಕಿದೆ. ತನ್ನ ಆಹಾರಕ್ಕೆ ಜಿಂಕೆ ಮತ್ತಿತರ ಮೇಲೆ ಅಧಾರ ಪಟ್ಟಿರುವ, ಹುಲಿಯು ಹುಲ್ಲ ತಿಂದು ಜೀವಿಸಲಿಕ್ಕೆ ಆಗುತ್ತದೆಯೇ. ಈ ಸೃಷ್ಟಿಯಲಿ ದಯೆ ಎಲ್ಲಿದೆ? ಎಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"Who does not appreciate the virtue of non-violence as a philosophy. Problems arise only when we start following it and intend not to harm any one. Can a tiger stop eating a deer and live on dry grass? There is no place for compassion in this nature." - Mankutimma

ವಿಷಯಗಳು

DeathMoralitySufferingNatureLoveWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.