ಪಟ್ಟಿಗೆ ಹಿಂತಿರುಗಿ

ಕಗ್ಗ 241 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು । ಅಸಮಂಜಸದಿ ಸಮನ್ವಯ ಸೂತ್ರ ನಯವ ॥ ವೆಸನಮಯ ಸಂಸಾರದಲಿ ವಿನೋದವ ಕಾಣ್ಬ । ರಸಿಕತೆಯೆ ಯೋಗವಲೊ - ಮಂಕುತಿಮ್ಮ ॥ ೨೪೧ ॥

asamadali samateyanu viShamadali maitriyanu । asamanjasadi samanvaya sUtra nayava ॥ vesanamaya samsAradali vinOdava kANba । rasikateye yOgavalo - Mankutimma ॥ 241 ॥

ಕನ್ನಡದಲ್ಲಿ ಅರ್ಥ

ಸಮವಲ್ಲದ ವಿಷಯದಲಿ ಸಮತೆಯನು ಕಾಣುವುದು,ವಿಷಮದಲಿ ಸ್ನೇಹವನು ಕಾಣುವುದು,ಸಮಂಜಸವಲ್ಲದರಲ್ಲಿ ಸಮನ್ವಯದ ಸೂತ್ರವನ್ನು ಹೆಣೆಯುವುದು, ಸಂಕಷ್ಟಗಳೇ ತುಂಬಿರುವ ಈ ಸಂಸಾರದಲ್ಲಿ ವಿನೋದವನ್ನು ನಗೆಯನ್ನು ಕಾಣುವಂಥಾ ರಸಿಕತೆಯೇ,ಯೋಗವೆಂದು ತಿಳಿಯಬೇಕು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"One attains inner peace when he can see oneness among the dissimilar, when he respect friendship even in the face of danger, when one can come up with a recipe for harmony in chaos, when he is tasteful to find humour in this world filled with misery." - Mankutimma

ವಿಷಯಗಳು

LifeDeathSocietyPeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.