ಪಟ್ಟಿಗೆ ಹಿಂತಿರುಗಿ

ಕಗ್ಗ 236 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ತರುಜಾತಿ ಖಗಜಾತಿ ಮೃಗಜಾತಿಗಳು ನೂರು । ನರಜಾತಿ ಮಿಕ್ಕ ಜಾತಿಗಳಿಂದ ಬೇರೆ ॥ ನರರೊಳೋರೊರ್ವನುಂ ತಾನೊಂದು ಬೇರೆ ಜಗ । ಬೆರಕೆ ಸಾಮ್ಯಾಸಾಮ್ಯ - ಮಂಕುತಿಮ್ಮ ॥ ೨೩೬ ॥

tarujAti khagajAti mRugajAtigaLu nUru । narajAti mikka jAtigaLinda bEre ॥ nararoLu OrOrvanum tAnondu bEre jaga । berake sAmya asAmya - Mankutimma ॥ 236 ॥

ಕನ್ನಡದಲ್ಲಿ ಅರ್ಥ

ಗಿಡಗಳ ಜಾತಿ, ಪಕ್ಷಿಗಳ ಜಾತಿ, ಪ್ರಾಣಿಗಳ ಜಾತಿಗಳು ನೂರಾರು ಇವೆ ಆದರೆ ಮನುಷ್ಯ ಜಾತಿ ಇವೆಲ್ಲಕ್ಕಿಂತ ಭಿನ್ನ. ಪ್ರತಿಯೊಬ್ಬ ಮನುಷ್ಯನೂ ಒಂದು ಜಗದಂತೆ ಇದ್ದಾನೆ. ಇವನು ಸಾಮ್ಯದ ಮತ್ತು ಅಸಾಮ್ಯದ ಬೆರಕೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ಅರ್ಥ ಮತ್ತು ವ್ಯಾಖ್ಯಾನ

"Different kinds of plants, birds and animals - there are hundreds of them. But mankind is different. Every man lives his own world. There is individuality in every one. But, there is sameness in being human and the like for individuality." - Mankutimma

ವಿಷಯಗಳು

Life

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.