ಪಟ್ಟಿಗೆ ಹಿಂತಿರುಗಿ

ಕಗ್ಗ 207 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ । ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ ॥ ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ । ಕುಣಿವುದನುಕೂಲ ಬರೆ - ಮಂಕುತಿಮ್ಮ ॥ ೨೦೭ ॥

oNagi bEsageyinda maNNAgi kANadiha । tRuNa moLeyuvudu maraLi haniyeraDu bILe ॥ aNagirdu narana Asheyantu kaShTada dinadi । kuNivudu anukUla bare - Mankutimma ॥ 207 ॥

ಕನ್ನಡದಲ್ಲಿ ಅರ್ಥ

ಬೇಸಿಗೆಯಲ್ಲಿ ಒಣಗಿ ನಮಗೆ ಬರೀ ಮಣ್ಣಂತೆ ಕಾಣುವ ಹುಲ್ಲು ನಾಲ್ಕು ಹನಿ ಮಳೆ ಬಿದ್ದರೆ ಮತ್ತೆ ಚಿಗುರುವಂತೆ, ಕಷ್ಟದ ದಿನಗಳಲ್ಲಿ ಮನದ ಅಂತರ್ಯದಲ್ಲಿ, ಕಾಣದಂತೆ ಇದ್ದ ಮನುಷ್ಯನ ಆಸೆಗಳೆಲ್ಲ ಅನುಕೂಲವಾದ ಸ್ಥಿತ ಬಂದೊಡನೆಯೇ ಮತ್ತೆ ಚಿಗುರುತ್ತವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುತ್ತಾರೆ.

ಅರ್ಥ ಮತ್ತು ವ್ಯಾಖ್ಯಾನ

"A blade of grass dries in summer and gets burried in sand. Just when two drops of water falls over it, it springs back to life. Just like that man's desires are all hiding when he is in trouble. They all come out and start dancing when he is prosperous again." - Mankutimma

ವಿಷಯಗಳು

LifeSufferingNature

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.