ಪಟ್ಟಿಗೆ ಹಿಂತಿರುಗಿ

ಕಗ್ಗ 197 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಕನಲ್ದ ಹುಲಿ ಕೆರಳ್ದ ಹರಿ ಮುಳ್ ‍ಕರಡಿ ಛಲನಾಗ । ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ ॥ ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ । ವಣಗಿಹುವು ನರಮನದಿ - ಮಂಕುತಿಮ್ಮ ॥ ೧೯೭ ॥

kanalda huli keraLda hari muL karaDi Chala nAga । aNaku kapi sILnAyi modalAda mRugada ॥ seNasu musuDiya ghOra duShTa chEShTegaLu ellavu । aNagihavu naramanadi - Mankutimma ॥ 197 ॥

ಕನ್ನಡದಲ್ಲಿ ಅರ್ಥ

ಕೋಪಗೊಂಡ ಹುಲಿ, ಕೆರಳಿದ ಸಿಂಹ, ಮುಳ್ಳಿನ ಕರಡಿ, ಛಲ ಹಿಡಿದ ನಾಗರಹಾವು, ಚೇಷ್ಟೆಯ ಕಪಿ, ಬೇಟೆಯಾಡುವ ಸೀಳು ನಾಯಿ ಮೊದಲಾದ ಮೃಗಗಳ೦ತೆ ಹೋರಾಡುವ ಮುಖವಾಡ ಹೊತ್ತು ಘೋರವಾದ ದುಷ್ಟತೆಯಿಂದ ಕೂಡಿದ ಚೇಷ್ಟೆಗಳೆಲ್ಲ ಈ ಮಾನವನ ಮನಸ್ಸಿನಲ್ಲಿ ಅಡಗಿವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

"A hurt tiger, an angry lion, porcupine, adamant cobra, mimicking monkey, raging dog and other animals with their frightening fighting rogue faces are all hidden inside a man's mind." - Mankutimma

ವಿಷಯಗಳು

MoralityWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.