ಪಟ್ಟಿಗೆ ಹಿಂತಿರುಗಿ

ಕಗ್ಗ 168 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಅನುಬಂಧ ಜೀವಜೀವಕೆ ಪುರಾಕೃತದಿಂದ । ಮನದ ರಾಗದ್ವೇಷವಾಸನೆಗಳದರಿಂ ॥ ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು । ಕೊನೆಯಿರದ ಬಲೆಯೊ ಅದು - ಮಂಕುತಿಮ್ಮ ॥ ೧೬೮ ॥

anubandha jIva jIvake purAkRutadinda । manada rAga dvESha vAsanegaLu adarim ॥ tanukAnti mOha vikRutigaLum toDakinavu । kone irada baleyo adu - Mankutimma ॥ 168 ॥

ಕನ್ನಡದಲ್ಲಿ ಅರ್ಥ

ಜೇವಿ ಜೀವಿಗಳ ಮಧ್ಯೆ ಇರುವ ಅನುಬಂಧವು ಪೂರ್ವಕರ್ಮದಿಂದಲೇ ಉಂಟಾಗುತ್ತದೆ. ಮನಸ್ಸಿನ ಕೋಪ ದ್ವೇಷ ಮತ್ತು ವಾಸನೆಗಳೂ ಸಹ ಇದರಿಂದಲೇ. ದೇಹದ ಹೊಳಪು ಅದರ ಆಕರ್ಷಣೆ ಮತ್ತು ಆ ಆಕರ್ಷಣೆ ಯಿಂದ ಉಂಟಾಗುವ ತೊಂದರೆ ತೊಡಕುಗಳು ಒಂದು ಅಂತ್ಯವಿಲ್ಲದ ಬಲೆಯೆಂತೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಿಸುತ್ತಾರೆ.

ಅರ್ಥ ಮತ್ತು ವ್ಯಾಖ್ಯಾನ

"Our relationships with one another is a result of our prior actions which brings us together (or tears apart) now. These relationships gives rise to feelings in our minds - liking, hatred, indulgence. Beauty, love (attachment) and other distortions will hamper us from seeing the truth. Finally it will result in us making more relations - good or bad. This is an endless net." - Mankutimma

ವಿಷಯಗಳು

WisdomDeathMoralitySocietyLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.