ಪಟ್ಟಿಗೆ ಹಿಂತಿರುಗಿ

ಕಗ್ಗ 154 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ । ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ॥ ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ । ಪೊಸತಾಗಿಪುದು ಜಗವ - ಮಂಕುತಿಮ್ಮ ॥ ೧೫೪ ॥

posa rasam bErige anudinam odavi dhareyinda । sasige hosa taLira taleyali muDisuvante ॥ hosa sRuShTi sattvam ettaNino baruta anudinam । posatAgipudu jagava - Mankutimma ॥ 154 ॥

ಕನ್ನಡದಲ್ಲಿ ಅರ್ಥ

ಒಂದು ಗಿಡದ ಬೇರಿಗೆ ಹೊಸ ರಸವನ್ನು ಸತ್ವವಾಗಿ ಪೂರೈಸಿ, ಆ ಬೇರಿನ ಗಿಡದಲ್ಲಿ ಹೊಸ ಚಿಗುರನ್ನು ಮೂಡಿಸುವಂತೆ, ಹೊಸ ಸೃಷ್ಟಿಗೆ ಅನುವಾದ ಸತ್ವವು ಎಲ್ಲಿಂದಲೋ ಬಂದು ಈ ಜಗವನೆಲ್ಲ ಹೊಸತಾಗಿಸುತ್ತದೆ, ಎಂದು ಜಗತ್ತಿನಲ್ಲಿ ನಿರಂತರ ನಡೆಯುವ ಹೊಸತನದ ಆನಂದ ನೃತ್ಯವನ್ನು ಬಣ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"When water is poured at the roots of the tree every day, fresh sprouts emerge from the head of the tree. Like wise freshness is infused by the cosmic spirit into this world every day making it new every day." - Mankutimma

ವಿಷಯಗಳು

LifeNature

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.