ಪಟ್ಟಿಗೆ ಹಿಂತಿರುಗಿ

ಕಗ್ಗ 108 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು । ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ॥ ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ । ಜಡವೆ ಜೀವದ ವಸತಿ - ಮಂಕುತಿಮ್ಮ ॥ ೧೦೮ ॥

jaDavEnu? jIvavEm? chaitanya nidrisiru । veDeyella jaDalOka kallu kaDDi kasa ॥ aDagirpa chaitanyavu echharalu jantu jaga । jaDave jIvada vasati - Mankutimma ॥ 108 ॥

ಕನ್ನಡದಲ್ಲಿ ಅರ್ಥ

ಜಡವೇನು? ಜೀವವೇನು? ಚೈತನ್ಯ ಎಲ್ಲೆಲ್ಲಿ ನಿದ್ರಿಸಿದೆಯೋ ಅದೆಲ್ಲ ಜಡ. ಕಲ್ಲು ಕಡ್ಡಿ ಕಸ ಹೀಗೆ. ಹಾಗೆ ಅಡಗಿರುವ ಅಥವಾ ಸುಪ್ತವಾಗಿರುವ ಚೈತನ್ಯ ಎಚ್ಚರವಾದರೆ ಆ ವಸ್ತು ಜೀವಂತವಾಗುತ್ತದೆ. ಹಾಗಾಗಿ ಜಡವೆ ಜೀವಕ್ಕೆ ಮನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

What is a lifeless object? What is life? Where ever the energy is dormant - we call it life less; stone, stick and dirt. When the hidden enrgy is woken up, the world comes to life. In a way, life resides in lifeless objects. - Mankutimma [Translator's note: Just imagine a handful of paddy seeds. You keeep them for years, you will see no change - absolutely life less. Just sow it in sand; pour some water - you will see sprouts with in two days. Life was always hidden, sleeping in side the lifeless seeds. Sand, water and warmth of the earth only woke it up.]

ವಿಷಯಗಳು

LifeNatureWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.